ಡೈಲಿ ಸಾಲರ್ ನ ಪ್ರಮುಖ ಸುದ್ದಿಗಳು
1)" ಕಾರಗೃಹಕ್ಕೆ ಗೃಹ ಸಚಿವರ ಭೇಟಿ "
ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಇತರ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ವಿಚಾರವನ್ನು ಸರ್ಕಾರ ತೀರ್ಮಾನ ಮಾಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದೀಖಾನೆ ಪ್ರಾಧಿಕಾರವು ಕೋರ್ಟ್ನ ನಿರ್ದೇಶನದ ಮೇರೆಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಿದೆ. ವಿಚಾರಣಾದೀನ ಕೈದಿಯಾಗಿರುವುದರಿಂದ ಕೆಲವು ನಿಯಮಗಳ ಪ್ರಕಾರವೇ ಸ್ಥಳಾಂತರ ಮಾಡಬೇಕಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಸ್ಥಳಾಂತರ ಆಗಬಹುದು ಎಂದರು.
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಎಂಬುವನಿಗೆ
ಒಂದು ಬ್ಯಾರಕ್ನಿಂದ ಮತ್ತೊಂದು ಬ್ಯಾರಕ್ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಎಂಬುದು ನಿನ್ನೆ ಭೇಟಿ ನೀಡಿದ ವೇಳೆ ಗೊತ್ತಾಗಿದೆ. ಈ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಜೈಲಿನ ಮುಖ್ಯ ಅಧೀಕ್ಷಕ, ಅಧೀಕ್ಷಕನನ್ನು ಅಮಾನತು ಮಾಡಿದ್ದೇವೆ. ಈ ಸ್ಥಳಗಳಿಗೆ ಬೇರೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದರು.
2) " ಟಾರ್ಚ ಬಿಟ್ಟು ನೋಡುವ ಪರಿಸ್ಥಿತಿ ಬೇಕಿತ್ತಾ?"
ಸಿದ್ದರಾಮಯ್ಯನವರು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗವನ್ನು ಲಪಟಾಯಿಸಿದ್ದಾರೆ. ₹ 67 ಕೋಟಿಯನ್ನು ಲೂಟಿ ಮಾಡಿದ್ದಾರೆ. ಮುಖ್ಯಂಮತ್ರಿಗೆ ತಪ್ಪಿನ ಅರಿವಿಲ್ಲ. ಆ ಜಾಗ ಯಾರದ್ದು ಎಂಬುದನ್ನು ಮೊದಲು ಹೇಳಲಿ. ದಾಖಲೆಗಳನ್ನು ವೈಟ್ನರ್ ಹಾಕಿ ಅಳಿಸಿ ,ಈಗ ಟಾರ್ಚ್ ಬಿಟ್ಟು ನೋಡುವ ಪರಿಸ್ಥಿತಿ ಬೇಕಿತ್ತಾ? ಹಾಗೂ ದಾಖಲೆಗಳನ್ನು ಕಾರಲ್ಲಿ ಏಕೆ ಇಟ್ಟು ಕೊಂಡಿದ್ದಿರಿ, ಜನರ ಮುಂದೆ ಇಡಿ ಎಂದು ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
' ನನ್ನ ಮೇಲೆ ಪೋಲಿಸ್ ಇಲಾಖೆ ಬಿಟ್ಟು ಏನೇನು ನಡೆಸುತ್ತಿದ್ದಾರೆ ಎಂಬುದು ಗೊತ್ಯಿದೆ. ನಾನು ಜೈಲಿಗೆ ಹೋಗುವಂಥದ್ದು ಎನೂ ಮಾಡಿಲ್ಲ. ಅವರು ನೂರು ಜನ್ಮ ಎತ್ತಿ ಬಂದರೂ ನನ್ನನು ಏನೂ ಮಾಡಲು ಆಗುವುದಿಲ್ಲ ಎಂದು ಗುಡುಗಿದರು.
3) " HDKಯಷ್ಟು ಸುಳ್ಳುಗಾರ ದೇಶದಲ್ಲೇ ಇಲ್ಲ "
ಮುಡಾ ಪ್ರಕರಣದಿಂದ ನಾನು ಹೆದರಿದ್ದೇನೆ. ನನ್ನ ಕಾರಿನಲ್ಲೇ ದಾಖಲೆಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದೇನೆ
ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಬಹುಶಃ ಅವರಷ್ಟು ಸುಳ್ಳು ಹೇಳುವವರು ಈ ದೇಶದಲ್ಲೇ ಹುಟ್ಟಿಲ್ಲ ಎಂದು ಸಿಎಂ ಪ್ರತಿಕ್ರಿಯೆ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ವಿಶೇಷ ತನಿಖಾ ಆಯೋಗ ರಚಿಸಿದ್ದೇನೆ. ಕುಮಾರಸ್ವಾಮಿ ಬಳಿ ದಾಖಲೆಯಿದ್ದರೆ , ಆ ಆಯೋಗಕ್ಕೆ ಕೊಡಲಿ. ಅವರು ಸುಮ್ಮನೇ ಹಿಟ್ ಅಂಡ್ ರನ್ ಮಾಡತ್ತಾರೆ ಯಾವುದನ್ನೂ ಅಂತ್ಯಕ್ಕೆ ಒಯ್ದ ಉದಾಹರಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ನವರು ಹೇಳಿದರು.
4) " ರೈತರ ಪ್ರತಿಭಟನೆ " ಬಗ್ಗೆ ಕಂಗನಾ ವಿವಾದಾತ್ಮಕ ಹೇಳಿಕೆ
' ದೇಶದ ನಾಯಕತ್ವವು ಬಲಿಷ್ಠವಾಗಿಲ್ಲದೆ ಇದ್ದಿದ್ದರೆ ರೈತರ ಪ್ರತಿಭಟನೆಯು ಬಾಂಗ್ಲಾದೇಶದಲ್ಲಿ ಸೃಷ್ಠಿಯಾದಂತಹ ಸನ್ನೀವೇಶವನ್ನು ಭಾರತದಲ್ಲಿಯೂ ಸೃಷ್ಠಿಸುತ್ತಿತ್ತು' ಎಂದು ಸಂಸದೆ ಕಂಗನಾ ಹೇಳಿದ್ದಾರೆ. ಇವರು ಆಡಿರುವ ವಿವಾದಾತ್ಮಕ ಮಾತುಗಳ ಬಗ್ಗೆ ಬಿಜೆಪಿ ಅಸಮ್ಮತಿ ವ್ಯಕ್ತಪಡಿಸಿದೆ.
ಕಂಗನಾ ವಿವಾದ ಸೃಷ್ಠಿಸಿದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, 'ಇನ್ನು ಮುಂದೆ ಇತಂಹ ಮಾತುಗಳನ್ನು ಆಡಬಾರದು ' ಎಂದು ತಾಕೀತು ಮಾಡಿದೆ. ಕಂಗನಾ ಮಾತುಗಳನ್ನು ಬಿಜೆಪಿ ಪಕ್ಷ ಖಂಡಿಸಿದೆ ಎಂದು ತಿಳಿಸಿದೆ.
5) " ಡೆಂಗಿ ನಿಯಂತ್ರಣಕ್ಕೆ ' ಓವಿ ಟ್ರ್ಯಾಪ್ '
ಡೆಂಗಿ , ಮಲೇರಿಯಾ ನಿಯಂತ್ರಣಕ್ಕಾಗಿ ಈಡಿಸ್ ಸೊಳ್ಳೆಗಳನ್ನು ಆಕರ್ಷಿಸಿ ನಾಶಪಡಿಸುವ ಓವಿ ಟ್ರ್ಯಾಪ್ ಸಾಧನಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೋಪಾಲಪುರದಲ್ಲಿ ಚಾಲನೆ ನೀಡಿದರು.
' ಓವಿ ಟ್ರ್ಯಾಪ್ ಬಯೋ ಸಾಧನವಾಗಿದ್ದು , ಈಡಿಸ್ ಸೊಳ್ಳೆಗಳನ್ನು ಆಕರ್ಷಿಸಿ ನಾಶಪಡಿಸುತ್ತದೆ. ಸೊಳ್ಳೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಸಾಧನ ಅಳವಡಿಸು ಮೂಲಕ ಡೆಂಗಿ ನಿಯಂತ್ರಣಕ್ಕೆ ತರುವನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿವೆ.
ಪ್ರಯೋಗಿಕವಾಗಿ ಗೋಪಾಲಪುರದಲ್ಲಿ 120 ಓವಿ ಟ್ರ್ಯಾಪ್ ಸಾಧನಗಳನ್ನು ಮನೆಗಳಿಗೆ ಅಳವಡಿಸಲಾಗಿದೆ.
ಉತ್ತಮ ಫಲಿತಾಂಶ ದೊರೆತರೆ ರಾಜ್ಯಾದ್ಯಂತ ಓವಿ ಟ್ರ್ಯಾಪ್ ಸಾಧನಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
6) " ಕಾನೂನುಬಾಹಿರ ಆ್ಯಪ್ ಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ "
ಕಾನೂನುಬಾಹಿರವಾಗಿ ಸೇವೆ ನೀಡುತ್ತಿರುವ ರಾಪಿಡೊ ಮತ್ತು ಪೋರ್ಟರ್ ಆ್ಯಪ್ ಆಧಾರಿತ ಸಂಸ್ಥಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಾಲಕರ ಟ್ರೇಡ್ ಯೂನಿಯನ್ ಆಗ್ರಹಿಸಿದೆ.
ರಾಜ್ಯದಾದ್ಯಂತ ಚಾಲಕರು ವಾಣಿಜ್ಯ ಬಳಕೆ ವಾಹನಗಳ ಮೂಲಕ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ. ಅನಧಿಕೃತ ಬೈಕ್ ಟ್ಯಾಕ್ಸಿ ಮತ್ತು ಪೋರ್ಟರ್ ಸಂಸ್ಥೆಗಳಿಂದ ಆಟೋ ಮತ್ತು ಗೂಡ್ಸ್ ವಾಹನಗಳ ಮಾಲೀಕರಿಗೆ ನಷ್ಟವಾಗುತ್ತಿದೆ.ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಮೂಲಕ ಪ್ರದಿನ 80 ಸಾವಿರ ಬುಕ್ಕಿಂಗ್ ಸೇವೆ ನೀಡುತ್ತಿವೆ ಎಂದು ದೂರಿದರು.
7) " ಉಕ್ರೇನ್ ಮೇಲೆ ರಷ್ಯಾ ದಾಳಿ "
ಉಕ್ರೇನ್ ಮೇಲೆ ರಷ್ಯಾವು ಸೋಮವಾರ ಭಿಕರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ.
ಮಧ್ಯರಾತ್ರಿ ಆರಂಭವಾದ ದಾಳಿಯು ಬೆಳ್ಳಿಗ್ಗೆವರೆಗೂ ಮುಂದುವರಿದಿದ್ದು, ಉಕ್ರೇನ್ ಮೇಲೆ ರಷ್ಯಾ ಇತ್ತೀಚಿಗೆ ನಡೆಸಿದ ಬೃಹತ್ ದಾಳಿ ಇದಾಗಿದೆ.
ರಷ್ಯಾ ದಾಳಿಯಿಂದಾಗಿ ವಿವಿಧ ಭಾಗಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
8) " ದುನಿಯಾ ವಿಜಯ್ ಹೊಸ ಸಿನಿಮಾ ಘೋಷಣೆ "
ದುನಿಯಾ ವಿಜಿ ತಮ್ಮ ನಿರ್ದೇನದ ಎರಡು ಸಿನಿಮಾಗಳು ಹಿಟ್ ಅದ ಬೆನ್ನಲ್ಲೇ. ನಟ ,ನಿರ್ದೇಶಕ ದುನಿಯಾ ವಿಜಯ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
' ಸಲಗ' ಹಾಗೂ ' ಭೀಮ ' ಸಿನಿಮಾ ತಂಡವೇ ಈ ಹೊಸ ಸಿನಿಮಾದ ಭಾಗವಾಗಿರಲಿದೆ ಎಂದು ವಿಜಯ್ ಹೇಳಿದ್ದಾರೆ.
==========================================================
▶️ Daily Salar Digital is a thought-provoking, progressive journalism
platform. After keeping our readers informed through our renowned
📰 Salar Daily Urdu paper for 59 years, we have launched Daily Salar Digital
English. We are dedicated to amplifying diverse voices and shedding
light on the issues that matter the most. We're here to inform, engage,
and inspire change
Stay updated through our progressive journalism here:
🌐 Website: www.salarnews.in
👍 Facebook: / englishsalar
🐦 Twitter: / englishsalar
Instagram: / dailysalarenglish
==========================================================
#duniyavijay #kanganaranaut #dineshgundurao #rapido #porter #hdkumaraswamy #dboss #darshanthoogudeepa