swadeshi mela in MEI groubds in Bagalgunte, Dasarahalli, Bengaluru.
ಬೆಂಗಳೂರಿನ ದಾಸರಹಳ್ಳಿಯ ಬಾಗಲಗುಂಟೆ ಸಮೀಪದ ಎಂಇಐ ಆಟದ ಮೈದಾನದಲ್ಲಿ ಜನವರಿ 4ರಿಂದ 8ರ ತನಕ ಸ್ವದೇಶಿ ಮೇಳ ಆಯೋಜಿಸಲಾಯಿತು. ದೇಶೀಯ ಉತ್ಪಾದಕರಿಗೆ ಮಾರುಕಟ್ಟೆಯನ್ನು ಒದಗಿಸುವುದು, ನಮ್ಮ ದೇಶದ ಜನರಿಗೆ ದೇಶದ ಉತ್ಪನ್ನಗಳನ್ನು ಪರಿಚಯಿಸುವುದು ಈ ಸ್ವದೇಶಿ ಮೇಳದ ಮುಖ್ಯ ಉದ್ದೇಶ. ಸ್ಥಳೀಯ ಉತ್ಪನ್ನಗಳನ್ನು ಉತ್ಪಾದಿಸುವ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಜತೆಗೆ ಅವರ ಉತ್ಪನ್ನಗಳಿಗೆ ಬ್ರಾಂಡ್ ಒದಗಿಸುವ ವ್ಯವಸ್ಥೆ ಈ ಮೇಳದ ಮೂಲಕ ನಡೆಯಿತು.
ರಾಜ್ಯದ ವಿವಿಧ ಪ್ರದೇಶಗಳ ಆಹಾರಗಳನ್ನು ಪರಿಚಿಸುವ ಆಹಾರಮೇಳವನ್ನೂ ಇಲ್ಲಿ ಆಯೋಜಿಸಲಾಯಿತು.ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆ ಧರಿಸಿಕೊಂಡು ಬರುವ ಮಹಿಳೆಯರಿಗೆ ಲಕ್ಕಿಡಿಪ್ ಮುಖಾಂತರ ಸೌಭಾಗ್ಯವತಿ ಉಡುಗೊರೆಯನ್ನು ಇಡಲಾಗಿತ್ತು.
#ಸ್ವದೇಶೀಮೇಳ #swadeshimela #dasarahalli #bagalgunte #Bagalgunte #swadeshi #mela #swadeshiproducts