ರಾಘವೇಂದ್ರ ತೀರ್ಥನೀತ ರಾಜಿಸುವಾತ ||ರಾಘವೇಂದ್ರ||

Опубликовано: 16 Июнь 2026
на канале: Nature with NESH
106
1

ರಾಘವೇಂದ್ರ ತೀರ್ಥನೀತ
ರಾಜಿಸುವಾತ ||ರಾಘವೇಂದ್ರ||
ಪಾಪೌಘಗಳೆಲ್ಲವಾನೋಡಿಸಿ
ಪುಣ್ಯಗಳೀವಾತಾ IIಪಾಪII
||ರಾಘವೇಂದ್ರ||

ಬಣ್ಣ ಬಣ್ಣದಿಂದ ಬಹಳ ಬೋಧಿಸುತಾ
ಬಹಳ ಸಣ್ಣ ದೊಡ್ಡಭೀಷ್ಟಗಳ
ಸಾಧಿಸುವಾತಾ ||ಬಣ್ಣ||
ಪುಣ್ಯವಂತರಿಂದ ಬಹು ಪೂಜೆಗೊಂಬಾತ||೨||
ನಮಗೆ ಕಣ್ಣ ಹಬ್ಬವಾಗುವಂತೆ
ಕಾಣಿಸುವಾತಾ IIನಮಗೆII
||ರಾಘವೇಂದ್ರ||
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ರಕ್ಷಮಾಂ

ಕಾಮ ಕ್ರೋಧಾದಿಗಳನೆ ಕಾಲಿಲೊದ್ದಾತ
ಈತ ವ್ಯೋಮಕೇಶನಂತೆ ನಾಲ್ಕು
ವೇದ ಪ್ರಖ್ಯಾತಾ||ಕಾಮ||
ಭೂಮಿಯೊಳು ದುರ್ವಾದಿಗಳನೆ
ಭೂರಿ ಗೆದ್ದಾತ ||ಭೂಮಿ||
ಶ್ರೀಮಧ್ವಯೋಗೀಂದ್ರ ತೀರ್ಥರೆ
ಶಿಷ್ಯನೆಂಬಾತಾIIಶ್ರೀಮಧ್ವII
||ರಾಘವೇಂದ್ರ||
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ರಕ್ಷಮಾಂ

ಸಿಧ್ಧವಿದ್ಯೆಗಳಲಿ ಬಹು ಪ್ರಸಿಧ್ಧನಾದಾತಾ
ನಮ್ಮ ಮಧ್ವಶಾಸ್ತ್ರಗಳನೆ
ಮಾಡಿಕೊಟ್ಟಾತ ||ಸಿಧ್ಧ||
ಮಧ್ವೇಶವಿಠ್ಠಲನ ಧ್ಯಾನದಲಿದ್ದಾತ ||೨||
ತುಂಗ ಭದ್ರತೀರದಲ್ಲಿ
ತಾನು ವಾಸವಾದಾತ I|ತುಂಗII
||ರಾಘವೇಂದ್ರ||
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ಪಾಹಿಮಾಂ
ರಾಘವೇಂದ್ರ ರಾಘವೇಂದ್ರ
ರಾಘವೇಂದ್ರ ರಕ್ಷಮಾಂ