ದಿವ್ಯ ಪಯಣ: ಕಬಕ ಪುತ್ತೂರು ರೈಲು ನಿಲ್ದಾಣದ ಮೂಲಕ ವರ್ಷಕ್ಕೆ ಒಂದು ಬಾರಿ ಹಾದುಹೋಗುವ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ
ಈ ವೀಡಿಯೊದಲ್ಲಿ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಪ್ರತಿ ವರ್ಷವು ಎಪ್ರಿಲ್ 15ರಂದು ರಾತ್ರಿ ಹತ್ತೂರ ಒಡೆಯ,ಪುತ್ತೂರ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರ ದೇವರ ಸವಾರಿ ಕಬಕ ಪುತ್ತೂರು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 1ರ ಮೂಲಕ ಸಾಗುತ್ತದೆ. ಬೊಳುವಾರು, ಹಾರಾಡಿ,ಬನ್ನೂರು,ಪಡೀಲ್ ಮೂಲಕ ಸಾಗುವ ಶ್ರೀ ದೇವರ ಸವಾರಿ ಆಯಾ ಕಟ್ಟೆಯಲ್ಲಿ ಭಕ್ತರು ಸಲ್ಲಿಸುವ ಪೂಜೆ,ಹಣ್ಣುಕಾಯಿಗಳನ್ನು ಸ್ವೀಕರಿಸಿ ನಂತರ ಅಂತಿಮ ಕಟ್ಟೆಯಾದ ರೈಲು ನಿಲ್ದಾಣದ ಮುಂಭಾಗದಲ್ಲಿರುವ ಕಟ್ಟೆಗೆ ತೆರಳುವ ಪುಣ್ಯ ಕ್ಷಣಗಳು ಈ ವೀಡಿಯೊದಲ್ಲಿ ಒಳಗೊಂಡಿದೆ.
ಇದು ಭಾರತದಲ್ಲಿ ನಿಜವಾಗಿಯೂ ವಿಶಿಷ್ಟವಾಗಿದೆ ಮತ್ತು ಅಪರೂಪವಾಗಿದೆ. ಇತಿಹಾಸದ ಪ್ರಕಾರ ಅನೇಕ ವರ್ಷಗಳ ಹಿಂದೆ ರೈಲು ನಿಲ್ದಾಣ ಮತ್ತು ಹಳಿಗಳ ನಿರ್ಮಾಣವಾಗುವ ಮೊದಲು ಈ ಸ್ಥಳ ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಭತ್ತದ ಗದ್ದೆಯಾಗಿತ್ತು. ಹೀಗಾಗಿ ಸಂಪ್ರದಾಯದಂತೆ ಪೇಟೆ ಸವಾರಿ ಕಬಕ ಪುತ್ತೂರು ರೈಲು ನಿಲ್ದಾಣದ ಮೂಲಕ ಹಾದುಹೋಗುತ್ತದೆ.
In this video, you can witness the procession of the deity Mahalingeshwara passing through Platform Number 1 of Kabaka Puttur Railway Station. The deity crosses the railway tracks after receiving offerings of katte poojas and Hannu Kayi from devotees hailing from Bolwar, Haradi, Bannur, Padil, and the Railway Quarters, marking the occasion of the Annual Fair.
This event is truly unique and rare in India, where the procession of the deity traverses through railway tracks and platforms of a railway station. Legend has it that many years ago, before the construction of the railway station and tracks, the very location where the station now stands was a paddy field closely associated with the temple. Thus, in adherence to tradition and the sacred route of the procession, known as "Pete Savari," the deity's procession continues to pass through Kabaka Puttur railway station
Date: 15/04/2025
Place: Kabaka Puttur Railway Station,Puttur,D.K
©B Shreekara
Credit of video clip 2 goes to @pavansbhat13
#newreel #instagramreels #instareels #putturjatre #puttur #puttur_the_pearl_city #putturnahalingeshwara #tulunadu #coastalkarnataka #incredibleindia #spiritualjourney #ದಿವ್ಯಪಯಣ #ಪುತ್ತೂರಜಾತ್ರೆ #ಶ್ರೀಮಹಾಲಿಂಗೇಶ್ವರ #ಪೇಟೆಸವಾರಿ #indianrailways