ಚಿಪ್ ನಟ್ ಕೋಡಿಂಗ್ ಕ್ಲಬ್ ಗೆ ಸ್ವಾಗತ
ಕೋಡಿಂಗ್ ಕ್ಲಬ್ ನಲ್ಲಿ ನಾವು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳನ್ನು ಬಳಸಲಿದ್ದೇವೆ.
ಈ ವಿಡಿಯೋದಲ್ಲಿ ನಾವು ಸ್ಕ್ರ್ಯಾಚ್ ಇಂಟರ್ಫೇಸ್ ಅನ್ನು ಅರ್ಥ ಮಾಡಿಕೊಳ್ಳಲಿದ್ದೀರಿ.
ಎಲ್ಲ ಸಾಫ್ಟ್‌ವೇರ್ ಗು ವರ್ಷನ್ ಇದೆ. ಸ್ಕ್ರ್ಯಾಚ್ ಯಾವ ವರ್ಷನ್ ನಾವು ಇನ್ ಸ್ಟಾಲ್ ಮಾಡಿದ್ದೇವೆ ಎಂದು ನೋಡೋಣ. ಅದಕ್ಕಾಗಿ ನಿಮ್ಮ ಡೆಸ್ಕ್ ಟಾಪ್ ನಲ್ಲಿ ಇನ್ ಸ್ಟಾಲ್ ಮಾಡಿದ ಸ್ಕ್ರ್ಯಾಚ್ ಸಾಫ್ಟ್‌ವೇರ್ ನ್ನು ಓಪನ್ ಮಾಡಿ. ಇಲ್ಲಿ ಕಾಣುವ ಸ್ಕ್ರ್ಯಾಚ್ ಬಟನ್ ಕ್ಲಿಕ್ ಮಾಡಿ. ಈ ವಿಂಡೋ ಕಾಣಿಸಿಕೊಳ್ಳುತ್ತದೆ. ನಾವು ಆವೃತ್ತಿ 3.12.0 ಅನ್ನು ಇನ್ ಸ್ಟಾಲ್ ಮಾಡಿದ್ದೇವೆ.
ನಿಮಗೆ ಡೌನ್‌ಲೋಡ್ ಮಾಡಲು ಸಾಧ್ಯವಾಗದಿದ್ದರೆ, ನೀವು ಸ್ಕ್ರಾಚ್.ಮೀಟ್.ಎದು ವೆಬ್‌ಸೈಟ್‌ಗೆ ಹೋಗಿ ಕ್ರಿಯೇಟ್ ಬಟನ್ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಪ್ರಾಜೆಕ್ಟ್ ಮಾಡಬಹುದು.
ನೀವು ಯಾವುದೇ ನಾಟಕವನ್ನು ನೋಡಿದ್ದೀರಾ? ನಾಟಕ ಎಂದಾಗ ನಿಮ್ಮ ಮನಸ್ಸಿಗೆ ಯಾವ ವಿಷಯಗಳು ಬರುತ್ತವೆ? ಅವುಗಳನ್ನು ಪಟ್ಟಿ ಮಾಡಿ. ನಮ್ಮ ಮನಸ್ಸಿಗೆ ಈ ಮೂರು ವಿಷಯಗಳು ಬಂದವು.
ಸ್ಟೇಜ್ , ಮ್ಯೂಸಿಕ್, ನಟ ಮತ್ತು ನಟಿಯರು
ನಾವು ಇಲ್ಲಿ ನಾಟಕದ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ ಎಂದು ನೀವು ಯೋಚಿಸುತ್ತಿದ್ದೀರಾ? ಓಹ್ ಇದು ನಾಟಕ ಕ್ಲಾಸ್ ಅಲ್ಲ. ಮತ್ತು ನಾಟಕವು ಸಾಮಾನ್ಯವಾದದ್ದನ್ನು ಹೊಂದಿವೆ.
ಸ್ಕ್ರಾಚ್ ಮತ್ತು ನಾಟಕ ಗಳಲ್ಲಿ ಕೆಲವು ಸಾಮಾನ್ಯ ವಾದ ವಿಷಯಗಳಿವೆ.
ಆಸಕ್ತಿದಾಯಕ ಅಲ್ಲವೇ?
ಇದು ಪರದೆಯ ವಿನ್ಯಾಸ ಅಥವಾ ನೀವು ಇಂಟರ್ಫೇಸ್ ಎಂದೂ ಹೇಳಬಹುದು. ನಾವು ಇದನ್ನು 4 ಮುಖ್ಯ ಭಾಗಗಳಾಗಿ ವಿಂಗಡಿಸಬಹುದು.
1. Stage Area
2. Sprite List and Background List
3. Script Area
4. Blocks Palette
ನಾಟಕದಂತೆ ಇಲ್ಲೂ ಸ್ಟೇಜ್ ಇದೆ. ಸ್ಟೇಜ್ ನ್ನು ಸೆಟ್ ಅಪ್ ಮಾಡಿ ಕ್ಕೊಳ್ಳಬಹುದು. ನೀವು ಒಂದು ಕಥೆ ಯನ್ನು ಅಥವಾ ಆಟವನ್ನು ಕ್ರಿಯೇಟ್ ಮಾಡುವಾಗ, ಕಥೆಗೆ ತಕ್ಕಂತೆ ಸ್ಟೇಜ್ ನ್ನು ಸೆಟ್ ಮಾಡಿಕ್ಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಮೊದಲು ಇಲ್ಲಿರುವ ಬೆಕ್ಕನ್ನು, ಡಿಲೀಟ್ ಬಟನ್ ಉಪಯೋಗಿಸಿ ತೆಗೆಯಿರಿ. ಬ್ಯಾಕ್ಡ್ರಾಪ್ಸ್ ಬಟನ್ ಕ್ಲಿಕ್ ಮಾಡಿ, ನಿಮಗೆ ಬೇಕಾದ ಚಿತ್ರವನ್ನು ಆಯ್ಕೆ ಮಾಡಿ. ನಾನು ಇದನ್ನು ಆಯ್ಕೆ ಮಾಡುತೇನೆ.
ಸ್ಪ್ರೈಟ್‌ಗಳು:
ನಾಟಕದಲ್ಲಿ ನಟ, ನಟಿಯರು ಅಥವಾ ಪಾತ್ರಗಳು ಇರವಂತೆ ಇಲ್ಲಿ ಸ್ಪ್ರೈಟ್‌ಗಳು ಇವೆ.
ನಾಟಕದಲ್ಲಿ ನಟ, ನಟಿಯರು ಅಥವಾ ಪಾತ್ರಗಳು ಇರವಂತೆ ಇಲ್ಲಿ ಸ್ಪ್ರೈಟ್‌ಗಳು ಇವೆ.
ನಿಮ್ಮ ಪ್ರೋಗ್ರಾಂನಲ್ಲಿ ಒಂದು ಅಥವಾ ಹೆಚ್ಚಿನ ಸ್ಪ್ರೈಟ್‌ಗಳು ಇರಬಹುದು.
ಸ್ಪ್ರೈಟ್ ಅನ್ನು ಹೇಗೆ ಆಯ್ಕೆ ಮಾಡುವುದು? ಅದಕ್ಕಾಗಿ ಇಲ್ಲಿ ತೋರಿಸಿರುವಂತೆ ಸರ್ಚ್ ಮಾಡಿ ಮತ್ತು ಬೇಕಾದ ಚಿತ್ರವನ್ನು ಆಯ್ಕೆ ಮಾಡಿಕ್ಕೊಳ್ಳಿ.
ಈ ಸ್ಪ್ರೈಟ್ ಅನ್ನು ನೀವು ಎಲ್ಲಿ ಬೇಕಾದರೂ ಇರಿಸಿಕ್ಕೊಳ್ಳಬಹು.
ನೀವು ಸ್ಪ್ರೈಟ್ ಹೆಸರನ್ನು ಸಹ ಬದಲಾಯಿಸಬಹುದು.
ನೀವು ಗಾತ್ರವನ್ನು ಸಹ ಬದಲಾಯಿಸಬಹುದು. ಗಾತ್ರವನ್ನು ದೊಡ್ಡ ಮಾಡಲು ದೊಡ್ಡ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಸಣ್ಣ ಮಾಡಲು ಕಡಿಮೆ ಸಂಖ್ಯೆ ಯನ್ನು ಟೈಪ್ ಮಾಡಿ.
ನೀವು ಒಂದಕ್ಕಿಂತ ಹೆಚ್ಚು ಸ್ಪ್ರೈಟ್‌ಗಳನ್ನು ಆಯ್ಕೆ ಮಾಡಿಕ್ಕೊಳ್ಳಬಹುದು..
ನೀವು ಸ್ಪ್ರೈಟ್ ಅನ್ನು ಡಿಲೀಟ್ ಸಹ ಮಾಡಿಕ್ಕೊಳ್ಳಬಹುದು.
ಸ್ಕ್ರಿಪ್ಟ್ ಏರಿಯಾ: ನಿಮ್ಮ ಕೋಡ್ ಅನ್ನು ನೀವು ಬರೆಯುವ ಸ್ಥಳ ಇದು.
ಬ್ಲಾಕ್ಸ್:
ಸ್ಕ್ರಿಪ್ಟ್‌ಗಳನ್ನು ರಚಿಸಲು ನಿಮಗೆ ಬ್ಲಾಕ್‌ಗಳಿವೆ. ನೀವು ಇಲ್ಲಿ ನೋಡುವಂತೆ ಅವು ಬೇರೆ ಬೇರೆ ಬಣ್ಣಗಳಲ್ಲಿ ಇವೆ. ಬ್ಲಾಕ್ಗಳಿಗೆ ಅವುಗಳು ಏನು ಮಾಡುತ್ತವೆ ಎಂಬುದರ ಆಧಾರದ ಮೇಲೆ ಬಣ್ಣವನ್ನು ನೀಡಲಾಗಿದೆ. ನೀವು ಇಲ್ಲಿ ನೋಡುವಂತೆ ಬ್ಲಾಕುಗಳಿಗೆ ಮೂವ್ಸ್, ಲುಕ್ಸ್,ಸೌಂಡ್ , ಇವೆಂಟ್ಸ್ ಮುಂತಾದ ಹೆಸರನ್ನು ಕೊಡಲಾಗಿದೆ.
ಆ ವಿಭಾಗದಲ್ಲಿ ಲಭ್ಯವಿರುವ ಎಲ್ಲಾ ಬ್ಲಾಕ್‌ಗಳನ್ನು ನೋಡಲು ಒಂದು ವಿಭಾಗದ ಮೇಲೆ ಕ್ಲಿಕ್ ಮಾಡಿ.
ಲುಕ್ಸ್ ಬ್ಲಾಕ್ ಮೇಲೆ ಕ್ಲಿಕ್ ಮಾಡಿ.
ಸೇ ಬ್ಲಾಕ್ ಅನ್ನು ಬಳಸಿ ಸ್ಪ್ರೈಟ್ ಏನನ್ನಾದರೂ ಹೇಳಬಹುದು. ಇಲ್ಲಿ ಸ್ಪ್ರೈಟ್ 2 ಸೆಕೆಂಡುಗಳ ಕಾಲ ಹಲೋ ಹೇಳುತ್ತದೆ.
ನೆಕ್ಸ್ಟ್ ಕಾಸ್ಟ್ಯೂಮ್ ಎಂದರೇನು? ಇದು ಸ್ಪ್ರೈಟ್ ಹೇಗೆ ಕಾಣುತ್ತದೆ, ಸ್ಪ್ರೈಟ್ ನ ವೇಷಭೂಷಣ ಹೇಗಿರುತ್ತದೆ ಎಂಬುದನ್ನು ನಿರ್ಧರಿಸತ್ತದೆ. . costumes ಯಾವುವು? ಕಾಸ್ಟ್ಯೂಮ್ಸ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಸ್ಪ್ರೈಟ್‌ಗೆ ಲಭ್ಯವಿರುವ ಕಾಸ್ಟ್ಯೂಮ್ಸ್ ಯಾವುವು ಎಂಬುದನ್ನು ನೀವು ನೋಡಬಹುದು. ಈ ಸ್ಪ್ರೈಟ್ 4 ವಿಭಿನ್ನ ಕಾಸ್ಟಿಮ್ಸ್ ನ್ನು ಹೊಂದಿದೆ.
ಈ ಬ್ಲಾಕ್ಸ್ ಗಳನ್ನು ಜೋಡಿಸಿದಾಗ ನಮಗೆ ಇನ್ ಸ್ಟ್ರಕ್ಷನ್ಸ್ ಸೆಟ್ ಸಿಗುತ್ತದೆ. ಇವುಗಳು ನೀವು ಸ್ಪ್ರೈಟ್‌ಗೆ
ಕೊಡುವ ಸೂಚನೆಗಳಾಗಿವೆ.
ಇದು ಒಂದು ಸಣ್ಣ ಪ್ರೋಗ್ರಾಮ್
ಮುಂದಿನ ಹಂತ : ಪ್ರೋಗ್ರಾಮ್ ನ್ನು ರನ್ ಮಾಡುವುದು ಆಗಿದೆ. ಏನಿದು? ಎಂದರೆ ಪ್ರೋಗ್ರಾಮನ್ನು ಪ್ರಾರಂಭ ಮಾಡುವುದು ಆಗಿದೆ. ಇದಕ್ಕಾಗಿ ಇಲ್ಲಿ ತೋರಿಸಿರುವ ಹಸಿರು ಬಾವುಟ ಅಥವಾ ಗ್ರೀನ್ ಫ್ಲಾಗ್
ನ್ನು ಬಳಸಲಾಗುತ್ತದೆ. ಪ್ರೋಗ್ರಾಮನ್ನು ನಿಲ್ಲಿಸಲು ಕೆಂಪು ಬಟನ್ ನ್ನು ಬಳಸ ಬಹುದು.
ಗ್ರೀನ್ ಫ್ಲಾಗ್ ಅನ್ನು ಬಳಸಲು ಇವೆಂಟ್ ಬ್ಲಾಕ್ ಗೆ ಹೋಗಿ, ವೆನ್ ಗ್ರೀನ್ ಫ್ಲಾಗ್ ಕ್ಲಿಕ್ ಡ್ ಬ್ಲಾಕ್ ಉಪಯೋಗಿಸಿ.
ಈಗ ಗ್ರೀನ್ ಫ್ಲಾಗ್ ಕ್ಲಿಕ್ ಮಾಡಿ. ಪ್ರೋಗ್ರಾಂ ರನ್ ಆಗ್ತಾ ಇದೆ.
ಸ್ಪ್ರೈಟ್ ಹಲೋ ಎಂದು ೨ ಸೆಕೆಂಡ್ ಹೇಳ್ತದೇ.
ಆಮೇಲೆ ಕಾಸ್ಟ್ಯೂಮ್ ಬದಲಾಯಿಸುತ್ತದೆ
ಆಮೇಲೆ ಕಲರ್ ಚೇಂಜ್ ಆಗ್ತದೆ.
ಪುನಃ ಗ್ರೀನ್ ಫ್ಲಾಗ್ ಕ್ಲಿಕ್ ಮಾಡಿ ನೋಡಿ.
ಸ್ಕ್ರಿಪ್ಟ್ ರನ್ ಆಗುವಾಗ ಅದು ಹೊಳೆಯುವುದನ್ನು ಕೂಡ ನೋಡಬಹುದು.
ಫುಲ್ ಸ್ಕ್ರೀನ್ ಮೋಡ್ ಗೆ ಹೋಗಲು ಈ ಬಟನ್ ಕ್ಲಿಕ್ ಮಾಡಿ. ಗ್ರೀನ್ ಫ್ಲಾಗ್ ಕ್ಲಿಕ್ ಮಾಡಿ ನೋಡಿ.
ನಿಮ್ಮ ಸ್ಕ್ರಿಪ್ಟ್ ಗೆ ಇನ್ನೂ ಹೆಚ್ಚಿನ ಸ್ಕ್ರಿಪ್ಟ್ ಸ್ಕ್ರಿಪ್ಟ್ ನ್ನು ಸೇರಿಸಿರಿ.
ನೀವು ಮ್ಯೂಸಿಕ್ ಕೂಡ ಸೇರಿಸಿಕ್ಕೊಳ್ಳಬಹುದು. ಮ್ಯೂಸಿಕ್ ಹೇಗೆ ಸೇರಿಸುವುದು ಎಂದು ಮುಂದಿನ ವಿಡಿಯೋದಲ್ಲಿ ತಿಳಿಸುತ್ತೇವೆ.
ಬ್ಲಾಕ್ಗಳನ್ನು ಸೇರಿಸುವಾಗ ಒಂದು ಆಸಕ್ತಿದಾಯಕ ವಿಷಯವನ್ನು ಗಮನಿಸಿದ್ದೀರಾ? ಅವುಗಳು ಪಜಲ್ ಪೀಸಸ್ ಅಥವಾ ಪಜಲ್ ತುಂಡುಗಳಂತೆ ಕಾಣುತ್ತವೆ.
ನೀವು ಈ ರೀತಿಯಾಗಿ ಬ್ಲಾಕ್ಸ್ ಗಳನ್ನು ಸೇರಿಸಲು ಸಾಧ್ಯವಿಲ್ಲ. ಅಲ್ಲಿ ಅಂತರ ವಿದೆ. ಅಂತರ ಇರ ಬಾರದು. ಗ್ಯಾಪ್ ಇರ ಬಾರದು. ಇದು ಸರಿಯಾಗಿದೆ. ಇಲ್ಲಿ ಅಂತರ ವಿಲ್ಲ.
ಬ್ಲಾಕ್ ಗಳು ಒಂದಕ್ಕೊಂದು ಸರಿಯಾಗಿ ಜೋಡಿಕ್ಕೊಳ್ಳ ಬೇಕು. ಇದು ಸರಿ ಯಾದ ಜೋಡಣೆ.
ಇಲ್ಲಿ ಒಂದು ಕುತೂಹಲಕಾರಿ ಪ್ರಶ್ನೆ.
ಕೆಂಪು ಷಡ್ಭುಜಾಕೃತಿಯ ಗುಂಡಿಯ (button) ಕಾರ್ಯವೇನು?
ಸ್ಪ್ರೈಟ್ ಅನ್ನು ಹೇಗೆ ಅನಿಮೇಟ್ ಮಾಡುವುದು ಎಂದು ಮುಂದಿನ ವೀಡಿಯೊದಲ್ಲಿ ನಾವು ನಿಮಗೆ ತೋರಿಸುತ್ತೇವೆ.